"ಎದೆಗೆ ಬಿದ್ದ ಅಕ್ಷರ"
ಇದು ಡ್ಯಾಟಾ ಯುಗ ಅಂತರ್ಜಾಲದಲ್ಲಿ ತಡಕಿದರೆ ಸಾಕು, ಉದಾಹರಣೆಗೆ ಎಡಪಂಥೀಯನಾಗಿರು ಬಲಪಂಥೀಯನಾಗಿರು ನಿನ್ನ ಲೇಖನವನ್ನು ಸಮರ್ಥಿಸಲು ಮಾಹಿತಿ ರೆಡಿ. ಇಂಥ ಯಾವುದೆ ಮಾಹಿತಿ ಇಲ್ಲ. ನನ್ನಂಥಹ ಸಾಮಾನ್ಯ ಓದುಗನಿಗೆ ತಿಳಿದಿರುವ ಬುದ್ಧ, ಬಸವ ಅಂಥವರದೆ ಉದಾಹರಣೆಗಳು ಕಾಣಸಿಗುವ ದೇವನೂರು ಮಹಾದೇವ ಅವರ ಪುಸ್ತಕ "ಎದೆಗೆ ಬಿದ್ದ ಅಕ್ಷರ’ ಓದಬೇಕೆ ?. ಸುಮಾರು ಮೂರು ಸಾವಿರ ವರ್ಷಗಳೆ ಬೇಕಾದವು ಬ್ರಾಹ್ಮಣ ವರ್ಗಕ್ಕೆ ತಾವುಗಳು ಹೆಜ್ಜೆಯಿಟ್ಟ ಹಾದಿಯನ್ನು ಸ್ವಲ್ಪವಾದರು ವಿಮರ್ಶಿಸಿಕೊಳ್ಳಲು. ಇಂದಿಗು ವಿಮರ್ಶೆ ಆಗುತ್ತಿದೆಯೆ ಎಂಬ ಅನುಮಾನ, ಭಯಪಡಿಸುವುದು ಆಗಾಗ ಕೇಳಿಬರುವ ಮನುವಿನ ಗುಣಗಾನ ? ಇಷ್ಟನ್ನೆ ಪ್ರಶ್ನಿಸಿ ಪುಸ್ತಕ ಬರೆದಿದ್ದರೆ ಸಾಕಿತ್ತು ಅಷ್ಟೆ ಪ್ರತಿಗಳು ಮಾರಾಟವಾಗುತ್ತಿದ್ದವೇನೊ.
ಸಮಾಜದ ಕುರಿತ ಬರವಣಿಗೆಯೆಂದರೆ ಪುಟಕ್ಕೆರ್‍ಅಡರಂತೆ ಸಿಗಲೆ ಬೇಕು ಸಂಖ್ಯಾಧಾರಿತ ತೌಲನಿಕ ವಿಶ್ಲೇಷಣೆ, ಇಲ್ಲದಿದ್ದರೆ ಅದು ಬರವಣಿಗೆಯೆ ? ಆದರೆ ಮಹಾದೇವರ ಪುಸ್ತಕದ ಪ್ರತಿ ಪುಟದಲ್ಲು ಸಿಕ್ಕುವುದು ಅಷ್ಟು ಸುಲಭವಾಗಿ ಕಾಣಸಿಗದ ಕಾರುಣ್ಯದ ಹೊನಲು, ಅಯ್ಯಾ ಹೊಡೆದಾಡದಿರು ಎಂಬ ಆರ್ತನಾದ,ಜಾತಿಯನ್ನು ಮೀರಿದ ಯೋಚನೆ, ಇದು ನಮ್ಮೆಲ್ಲರ ಸಾಮಾಜವೆಂಬ ಬಹುದೊಡ್ದ ನಾಗರಿಕ ಕಲ್ಪನೆ ಮಿಗಿಲಾಗಿ ಅತ್ಯಂತ ವಸ್ತುನಿಷ್ಠ ಆತ್ಮ ವಿಮರ್ಶೆ, ಒಬ್ಬ ದಲಿತ ತನಗಿಂತ ಕೆಳಗಿನವನನ್ನು ನಡೆಸಿಕೊಳ್ಳುವ ರೀತಿ ಕಂಡು ಮರುಗುವ ಹೃದಯ. ಮೊದಲ ಲೇಖನಕ್ಕು ಕೊನೆಯ ಲೇಖನಕ್ಕು ಅಂತರ ೪ ದಶಕಗಳಿಗೂ ಹೆಚ್ಚಿರಬಹುದು, ಆದರು ಅದೆ ಹೃದಯ ವೈಶಾಲ್ಯತೆಯನ್ನು ಮೆರೆದಿರುವರು, ಇದು ಅಷ್ಟು ಸುಲಭ ಸಾಧ್ಯವಲ್ಲ.
ಕೇವಲ ೧೦೦-೧೫೦ ವರ್ಷಗಳಲ್ಲಿ ಈ ಮಟ್ಟಿಗೆ ತುಳಿತಕ್ಕೊಳಗಾದ ಸಮಾಜ ತನ್ನಾತ್ಮವನ್ನೆ ವಿಮರ್ಶೆ ಮಾಡಿಕೊಳ್ಳುವುದೆಂದರೆ ದಾರಿ ತಪ್ಪಿರುವ ಮಾನವಕುಲಕ್ಕೆ ದಾರಿ ಸಿಕ್ಕಿದಂತೆ. ಕುವೆಂಪು ಅವರ ಪದ್ಯವೊಂದರ ಮೊದಲ ಸಾಲು "ನಾಡಿನ ಪುಣ್ಯದ ಪೂರ್ವದಿಗಂತದಿ ನವ ಅರುಣೋದಯ ಹೊಮ್ಮುತಿದೆ" ಎನ್ನುವುದರ ಅರ್ಥ ಇದೆ ಏನೊ. ವಿಷಯಗಳನ್ನು ತಪ್ಪಾಗಿ ಅರ್ಥೈಸಿ ದ್ವೇಷ ಭಾವದಲ್ಲಿ ಬೇಯುತ್ತಿರುವ, ತಮ್ಮ ತೀಕ್ಷ್ಣ ಮತಿಗಾಹುತಿಯಾಗುತ್ತಿರುವ ಸಧ್ಯದ ಮನಸ್ಥಿತಿಗೆ ವಿಶೇಷವಾಗಿ ಮುಂದುವರಿದ ವರ್ಗಗಳಿಗೆ ಇಂಥಹ ತೀವ್ರತರವಾದ ವಿಮರ್ಶೆಯ ಪಾಠ ಬೇಕಿತ್ತು.
ಪುಸ್ತಕವನ್ನು ಪೂರ್ತಿಯಾಗೋದಲು ಧೈರ್ಯ ಸಾಲಲಿಲ್ಲ, ಕಾಲು ಭಾಗ ಇರುವಂತೆಯೆ ಮುಚ್ಚಿಟ್ಟೆ, ಮಧ್ಯಮ ವರ್ಗದವನೆಂದೊಮ್ಮೆ ಹೆಮ್ಮೆ ಪಡುತ್ತಿದ್ದ ನಾನು ನಾಚಿಕೆಯಿಂದ ತಲೆತಗ್ಗಿಸಿದೆ, ಮನವು ಪ್ರಶ್ನಿಸಿತು
ಅಕ್ಷರವು ಬರಿಯ ಮನಕ್ಕೆ ತಗುಲಿದರೆ ವಿಮರ್ಶೆ ಸಾಧ್ಯವೆ, ಎದೆಗೆ ಬಿದ್ದಾಗಲೆ ತಾನೆ ಅದು ಸಾಧ್ಯ.

" ಸುಟ್ಟರು ನಿನ್ನನ್ನು ನಿನ್ನ ಮನೆಗಳನ್ನು,
ಸಂತೃಪ್ತಿ ಪಡಿಸಿಕೊಳ್ಳಲು ತಮ್ಮ ಮನಗಳನ್ನು
ಆದರು ಹೊತ್ತಿಸಲಿಲ್ಲ ಮೊಂಬತ್ತಿ, ಅಯ್ಯೋ ನೀನೆ
ಉರಿಯುತ್ತಿರುವೆ ಮೇಣವಾಗಿ,
ಓ ಬಡವ ನಿನಗಾರುರಿಸುವರು ಮೊಂಬತ್ತಿ ?"
ಅಕ್ಷರವು ಬರಿಯ ಮನಕ್ಕೆ ತಗುಲಿದರೆ ವಿಮರ್ಶೆ ಸಾಧ್ಯವೆ, ಎದೆಗೆ ಬಿದ್ದಾಗಲೆ ತಾನೆ ಅದು ಸಾಧ್ಯ.
No comments:
Post a Comment