Tuesday, March 26, 2013

bharathaambeallakannadambe

  ಭಾರತಾಂಬೆ ಅಲ್ಲ ಕನ್ನಡಾಂಬೆ 

ಕೋ ಚೆ ಅವರ ಪುಸ್ತಕದಲ್ಲಿರಬೇಕು ಓದಿದ ನೆನಪು, ಕುವೆಂಪು ಅವರ ಈ ಕೆಳಗಣ ಸಾಲುಗಳಿಗೆ
"ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿನ್ನು ಪೂಜಿಸುವ ಬಾರ"
 ಸ್ಪೂರ್ಥಿ ಈ ವಿವೇಕಾನಂದರ ವಾಣಿ ಇರಬಹುದೆಂದು ಹೇಳುತ್ತಾರೆ
 For the next fifty years this alone shall be our keynote — this, our great Mother India. Let all other vain gods disappear for the time from our minds

ಸದ್ಯದ ರಾಜಕೀಯ ವಿದ್ಯಮಾನ, ಹಿಂದಿ ಹೇರಿಕೆ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ಪರಿಸ್ಥಿಯಲ್ಲಿ  ಯಾರೋ ಮೂರ್ಖರು ಸ್ವಹಿತಾಸಕ್ತಿ ಕಾಯುವುದಕ್ಕೆ ಹೆಣೆಯುತ್ತಿರುವ ಜಾಲದ ಕಾರಣ ಭಾರತಾಂಬೆಯ ಕಣ್ಣಿಗೆ ಕನ್ನಡಾಂಬೆಯ ಮಕ್ಕಳು ಕಾಣುತ್ತಿಲ್ಲ, ವಿಶಾಲ ದಿಟ್ಟಿಯನ್ನು ಬದಿಗಿಟ್ಟು ಸಂಕುಚಿತವೆನಿಸಿದರು ಪರವಾಗಿಲ್ಲ, ಈ ರೀತಿ ಬದಲಾಯಿಸಿ ಹಾಡುವ ಅವಶ್ಯಕತೆಯಿದೆ

"ನೂರು ದೇವರನೆಲ್ಲ ನೂಕಾಚೆ ದೂರ
ಕನ್ನಾಡಾಂಬೆಯೆ ದೇವಿ ನಮಗಿನ್ನು ಪೂಜಿಸುವ ಬಾರ"

[ಕುವೆಂಪು ಅವರು ಕ್ಷಮಿಸಬೇಕೆಂದು ಕೋರುತ್ತೇನೆ]