ಮುದ್ರೆ ಎಂದರೆ ಭಯ ನಾಮ ಎಂದರೆ ಭಯ
ಜಾತಿ ಮತ ಎಂದರೆ ಇನ್ನೂ ಭಯವಣ್ಣ
ಮಠ ಎಂದರೆ ಭಯ ಮಠಾದೀಶ್ವರ ಎಂದರೆ ಭಯ
ಅವರ ಮಾತುಗಳೆಂದರೆ ಇನ್ನೂ ಭಯವಣ್ಣ
ಮೂಢನಂಬಿಕೆ ಎಂದರೆ ಭಯ ನಕ್ಷತ್ರ ಜ್ಯೋತಿಷ್ಯ ಎಂದರೆ ಭಯ
ಬಡವನ ಸುಡುವ ಹೋಮ ಹವನಗಳೆಂದರೆ ಇನ್ನೂ ಭಯವಣ್ಣ
ಮತಾಂಧತೆ ಎಂದರೆ ಭಯ ಧರ್ಮಾಂಧತೆ ಎಂದರೆ ಭಯ
ಇವುಗಳ ಅಂಗ ಸಂಘಗಳ ಸ್ವಯಂ ಸೇವಕರೆಂದರೆ ಇನ್ನೂ ಭಯವಣ್ಣ
ಧರ್ಮ ರಕ್ಷಕ ಸ್ವಘೋಷಿತ ದುಷ್ಟ ಶಿಕ್ಷಕರೆಂದರೆ ಭಯ
ಎಲ್ಲದರ ಅಮಲೇರಿದ ಗುರುವಿನ ಮತ್ತೂ ಭಯವಣ್ಣ
No comments:
Post a Comment