Wednesday, April 24, 2013

bendre-humanity

ಬೇಂದ್ರೆ ಆ ಕಾಲದಲ್ಲೆ ನಮ್ಮೆಲ್ಲರ ಬಾಕಿ ತೀರಿಸುವಂತೆ ಹತ್ತು ರುಪಾಯಿ ದಕ್ಷಿಣೆಯನ್ನು ದೇವರಿಗಿಟ್ಟು ಮಾನವೀಯತೆ ಮೆರೆದರು. ಏನ್ ಹೇಳ್ತಾ ಇದಾನಿವ್ನು ಅಂತೀರ, ಇಂದು ಸಂಜೆ ಮಡಿವಾಳದ ಬಳಿ ಒಬ್ಬ ಮಹಿಳೆ ಚಮ್ಮಾರನಿಗೆ ನೀಡಿದ್ದು ಹತ್ತು ರುಪಾಯಿ ತನ್ನ ಚಪ್ಪಲಿಗೆ ಹೊಲಿಗೆ ಹಾಕಿದ್ದಕ್ಕೆ. ಅಂದು ಬೇಂದ್ರೆ ೧.೫೦ ರುಪಾಯಿ ಕೂಲಿ ಕೇಳಿದ ಚಮ್ಮಾರನಿಗೆ ನೀಡಿದ್ದು ಬರೋಬ್ಬರಿ ಹತ್ತು ರುಪಾಯಿ. ಬಿಸಿಲ ಬೇಗೆಯಲ್ಲಿ ಕಷ್ಟ ಪಟ್ಟು ಕೆಲ್ಸ ಮಾಡುತ್ತಿದ್ದ ಚಮ್ಮಾರನ ಕಷ್ಟ ಸುಖ ವಿಚಾರಿಸಿ ದಿನದ ಗಳಿಕೆ ಹತ್ತು ರುಪಾಯಿಯೆಂದು ತಿಳಿದು, ಅವನಿಗೆ ಸ್ಚಲ್ಪವೂ ನಷ್ಟವಾಗದಂತೆ ೧೦ ರೂ ನೀಡಿ, ಮನೆಗೋಗಿ ಕೊಡೆ ತಂದು ಅದರಡಿಯಲಿ ಕೆಲಸ ಮಾಡು, ಬಿಸಿಲಲ್ಲಿ ಬೇಡ ಅಂದರು.

ಇದು ಬೇಂದ್ರೆ ದೇವರಿಗೆ ವಂದಿಸಿದ ರೀತಿಯಲ್ಲವೆ...ರವೀಂದ್ರರ ಈ ಕೆಳಗಣ ಸಾಲುಗಳಿಗೆ(ಗೀತಾಂಜಲಿ) ಜೀವ ಬಂದಂತಾಯಿತಲ್ಲವೆ


Here is thy footstool and there rest thy feet where live the poorest, and lowliest, and lost.
When I try to bow to thee, my obeisance cannot reach down to the depth where thy feet rest among the poorest, and lowliest, and lost.

Pride can never approach to where thou walkest in the clothes of the humble among the poorest, and lowliest, and lost.

My heart can never find its way to where thou keepest company with the companionless among the poorest, the lowliest, and the lost.


ಇದರ ಅರ್ಥ ಹೀಗಿದೆ, ದೇವರ ಪಾದಗಳು ಬಡವ ದೀನ ದಲಿತರಿರುವಲ್ಲಿ ನೆಟ್ಟಿದೆ, ನಾನು ಸಲ್ಲಿಸಿದ ನಮನ ಆತನ ಪಾದಗಳ ಬಳಿ ಸೇರಲೆ ಇಲ್ಲ. ಅಂದರೆ ಸರಳತೆ ಇರುವಲ್ಲಿ ದೇವರು ಇರುವನು, ಬಡವರ ನಡುವೆ ದೇವರು ನಡೆದಾಡುವನು. ಬಡವರೊಡನೆ ಒಡನಾಟವಿಟ್ಟು ಅವರಿಗೆ ಸ್ಪಂದಿಸುವು ಸುಲಭ ಸಾದ್ಯವಿಲ್ಲ, ಮಾತಿನಲ್ಲಿ ಹೇಳುವುದು ಸುಲಭ, ಬಡವನ ಹೃದಯಕ್ಕೆ ನಮ್ಮ ಹೃದಯ ಬಡಿದರಷ್ಟೆ ಸಾಲುದು, ಸ್ವಲ್ಪ ಮಿಡಿದರೆ ಒಳ್ಳೆಯದು.

No comments:

Post a Comment