ಸಂತ ಶಿಶುನಾಳ ಶರೀಫ.
|
ಮೋದಿ ಅಣಕು ಗೀತೆ
|
ತರವಲ್ಲ ತಗಿ ನಿನ್ನ ತಂಬೂರಿ - ಸ್ವರ
ಬರದೆ ಬಾರಿಸದಿರು ತಂಬೂರಿ ; ಸರಸ ಸಂಗೀತದ ಕುರುಹುಗಳರಿಯದೆ ಬರದೆ ಬಾರಿಸದಿರು ತಂಬೂರಿ. ತಿದ್ದಿ ನುಡಿಸಬೇಕೊ ತಂಬೂರಿ ; ಸಿದ್ದ ಸಧಕರ ಸುವಿದ್ಯೆಗೆ ಒದಗುವ ಬುದ್ದಿವಂತಗೆ ತಕ್ಕ ತಂಬೂರಿ. ಬಾಳಬಲ್ಲವರಿಗೆ ತಂಬೂರಿ - ದೇವ ಭಾಳಾಕ್ಷ ರಚಿಸಿದ ತಂಬೂರಿ ; ಹೇಳಲಿ ಏನಿದರ ಹಂಚಿಕೆ ತಿಳಿಯದ ತಾಳಗೇಡಿಗೆ ಸಲ್ಲ ತಂಬೂರಿ. ಸತ್ಯ ಶರಧಿಯೊಳು ತಂಬೂರಿ - ನಿತ್ಯ ಉತ್ತಮರಾಡುವ ತಂಬೂರಿ ; ಬತ್ತೀಸರಾಗದ ಬಗೆಯನರಿಯದಂಥ ಕತ್ತಿಗಿನ್ಯಾತಕೆ ತಂಬೂರಿ. ಹಸನಾದ ಮ್ಯಾಳಕೆ ತಂಬೂರಿ - ಇದು ಕುಶಲರಿಗೊಪ್ಪುವ ತಂಬೂರಿ. ಶಿಶುನಾಳಧೀಶನ ಓದುಪುರಾಣದಿ ಹಸನಾಗಿ ಬಾರಿಸೊ ತಂಬೂರಿ. |
ತರವಲ್ಲ ತಗಿ ನಿನ್ನ ತಂಬೂರಿ
ಮೋದಿ ಸ್ವರ ಬರದೆ ಬಾರಿಸದಿರು ತಂಬೂರಿ ಮಾನವೀಯತೆಯ ಕುರುಹುಗಳರಿಯದೆ ಮೋದಿ ಬರದೆ ಬಾರಿಸದಿರು ತಂಬೂರಿ ಮದ್ದಲಿ ದನಿಯೊಳು ತಂಬೂರಿ - ಅದ ತಿದ್ದಿ ನುಡಿಸಬೇಕೊ ತಂಬೂರಿ; ಬುದ್ಧ ಬಸವ ಗಾಂಧಿ ನುಡಿಸಿದ ತಂಬೂರಿ ದಯೆಯುಳ್ಳವರಿಗೆ ತಕ್ಕ ತಂಬೂರಿ ಬಾಳಲು ಬಿಡುವವರಿಗೆ ತಂಬೂರಿ - ದೇವ ಭಾಳಾಕ್ಷ ರಚಿಸಿದ ತಂಬೂರಿ; ಹೇಳಲಿ ಏನಿದರ ಹಂಚಿಕೆ ತಿಳಿಯದ ತಾಳಗೇಡಿದೆ ಸಲ್ಲ ತಂಬೂರಿ ಸತ್ಯ ಶರಿಧಿಯೊಳು ತಂಬೂರಿ - ನಿತ್ಯ ಉತ್ತಮಾರಾಡುವ ತಂಬೂರಿ. ಬಡವರ ರೈತರ ಧೀನದಲಿತರ ಏಳಿಗೆಯನರಿಯದಂಥ ಕತ್ತಿಗಿನ್ಯಾತಕ ತಂಬೂರಿ. ಶಾಂತಿ ಮಂತ್ರವ ಪಠಿಸಲು ತಂಬೂರಿ - ಇದು ನ್ಯಾಯವಂತರಿಗೊಪ್ಪುವ ತಂಬೂರಿ. ಬಸವರಾದಿ ತತ್ತ್ವಗಳ ಓದಿ ನಡೆದು ಹಸನಾಗಿ ಬಾರಿಸೊ ತಂಬೂರಿ |
Sunday, April 28, 2013
Modi-barisadiru-tamburi
Subscribe to:
Post Comments (Atom)
No comments:
Post a Comment