Friday, August 24, 2012

dhooma_lele_i_poem_and_cigarette


A comparison between korean poem and kannada poem
 ಅಡಿಗರ ಧೂಮಲೀಲೆ ಹಾಗು ಕೊರಿಯನ್ "ನಾನು ಮತ್ತು ಸಿಗರೇಟು" ಪದ್ಯದಲ್ಲಿ ಕಂಡ ಸಾಮ್ಯ


I poem and cigarette [ korean poem by Mr O-sang-soon translated to English by lee jo mo ]

i poem and cigarette are
a trinity of the same
with different tones

i and my poetic spirit
are the smoke spewing in volume

riding on the endless curved tune
it thins , seeping into the heart
of the blue sky forever

 [ ನಾನು ಪ್ರಯತ್ನಿಸಿದ  ಕನ್ನಡದ ಅನುವಾದ ]
ನಾನು , ಪದ್ಯ ಮತ್ತು ಸಿಗರೇಟು
ಅದರದ್ದೆ ತ್ರಿವಳಿ ಸಂಗಮ [ ತ್ರಯೈಕತ್ವ]
ರಾಗಾಲಾಪಗಳು ಬೇರೆ ಬೇರೆ

ನಾನು ಮತ್ತು ನನ್ನ ಕಾವ್ಯಾತ್ಮ
ಸೂಸುತ್ತಿರುವ ಹೊಗೆಯ ಹೊನಲು

ಅನಂತ ರಾಗದಲೆಯ ಮೇಲದು ಮಾಡುತ್ತ ಸವಾರಿ
ಕರಗಿ ಕರಗಿ ಜಾರುವುದು ಆಕಾಶದೆದೆಯೊಳಗೆ
ಎಂದೆಂದಿಗು


 ಹಿನ್ನಲೆ:
 ನಾನು ಕಚೇರಿಯ ಕಾರ್ಯ ನಿಮಿತ್ತ 2011 ನವೆಂಬರ್ ತಿಂಗಳಲ್ಲಿ ಕೊರಿಯಾಗೆ ತೆರಳಿದ್ದೆ, ಕೆಲಸ ಮುಗಿಸಿ ಭಾರತಕ್ಕೆ ವಾಪಾಸಗುವ ಮುನ್ನ, ಅದೇನೋ ಹಿಂದಿನ ದಿನ ಅಂತರ್ಜಾಲದಲ್ಲಿ ಓದಿದ ಒಂದು ಕು ಸಾಂಗ್ ಕವಿಯ ಕೊರಿಯನ್ ಕಾವ್ಯ ನನ್ನಲ್ಲಿ ಅಲ್ಲಿನ ಕವಿಗಳ ಕವಿತೆಗಳನ್ನು ಓದುವ ಹಂಬಲವನ್ನು ಹಿಮ್ಮಡಿಸಿತು. ನಾನು ತಂಗಿದ್ದ ಹೊಟೆಲಿನ ಮಾಲೀಕರನ್ನು ಆಂಗ್ಲಕ್ಕೆ ತರ್ಜುಮೆಯಾಗಿರುವ ಪದ್ಯಗಳುಳ್ಳ ಪುಸ್ತಕ ಬೇಕೆಂದು ಕೋರಿದೆ. ಅವರು ನನಗೆ ಖುಷಿಯಾಗಿ ಹಣವನ್ನು ತೆಗೆದುಕೊಳ್ಳದೆ ಉಡುಗೊರೆಯಾಗಿ ಜೆ ಮೋ ಲೀ ಬರೆದಿರುವ modern korean poems translated into English ಪುಸ್ತಕವನ್ನು ನೀಡಿದರು[ಅವರ ಪ್ರಕಾರ ಇದೊಂದೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ಪುಸ್ತಕ ]

 ಟಿಪ್ಪಣಿ:
 ಇದರಲ್ಲಿ ಸಂಗ್ ಸೂ ಅವರ ಪದ್ಯ "ನಾನು ಮತ್ತು ಸಿಗರೇಟು" ಓದಿದಕೂದಲೆ ಅಡಿಗರ ಧೂಮಲೀಲೆ ಕವನ ನೆನಪಾಯಿತು.
ಇದು [ನಾನು ಮತ್ತು ಸಿಗರೇಟು] ಸರಳತೆಯಿಂದ ಕೂಡಿದ್ದು ತನ್ನದೆ ಸೊಗಡನ್ನು ಮೆರೆಯುತ್ತಿದೆ. ಒಬ್ಬ ಕೊರಿಯ ದೇಶದ ನವ್ಯ ಕವಿ, ಮತ್ತೊಬ್ಬ ಕರುನಾಡ ನವ್ಯ ಕವಿ ಇವೆರಡನ್ನು ಹೋಲಿಕೆ ಮಾಡದಿರಲಾಗಲಿಲ್ಲ. ಮೊದಲ ನೋಟಕ್ಕೆ ಆಳದಲ್ಲಿ ಸಾಮೀಪ್ಯವಿಲ್ಲದಿದ್ದರು ಸರಳ ಹಾಗು ಮನಕ್ಕೆ ಮುದ ನೀಡುವ ಸಾಮೀಪ್ಯವಿದೆ ಎನಿಸಿತು. ಕೆಳಗಿನ ಧೂಮಲೀಲೆಯ ಸಾಲುಗಳು, ಕೊರಿಯನ್ ಪದ್ಯದ ಮೊದಲ ಸಾಲುಗಳನ್ನು ನೆನಪಿಸುತ್ತವೆ.

 ಸಿಗರೇಟಿನ ಹೊಗೆ ವರ್ತುಳ ವರ್ತುಳ..
 
ವಿವಿಧರೂಪ ವಿಹ್ವಲವಿಲಾಪಗಳು..
 
ಗಾಳಿಯಲೆಯಮೇಲೆ [ಧೂಮಲೀಲೆ ಸಾಲುಗಳು - ]

 ನಾನು ನೀನು ಸಿಗರೇಟು. ಅಹಹ !. ಅದೆ ಬಣ್ಣವಣ್ಣ ತಿಣ್ನ
 
ನಮ್ಮ ಬಾಳು ಹೊಗೆ, ಕಾಣದೊಂದು ನಗೆ ಹರಹುತಿರುವ ಬನ್ನ !
      [
ಧೂಮಲೀಲೆ ಸಾಲುಗಳು ೨೭ - ೨೮]

ಆಡಿಗರ ಪದ್ಯ ವಿಶೇಷವಾದ ಅರ್ಥದಿಂದ ಕೂಡಿದ್ದು ನಮ್ಮನ್ನು ಹಾಗು ಬಾಳನ್ನು ಸಿಗರೇಟಿಗೆ ಹೋಲಿಸಿ, ಯಾವುದೋ ಕಾಣದ ಕೈ-ಬಾಯಿ ಸೇದಿ ನಮ್ಮನ್ನು ಆಡಿಸುತಿರುವ ಭಾವದಲೆಯಲ್ಲಿ ತೇಲಿಸುತ್ತದೆ.
  " ಸಿಗರೇಟು ತೋರುತಿದೆ; ಹೊಗೆಯು ಏರುತಿದೆ; ಕುಡಿವ ಸೊಗಸುಗಾರ ಯಾವನವನು ?
   
ಕಾಣಿಸದು ಕುಡಿವ ಬಾಯ್ ... [ ಧೂಮಲೀಲೆ ಸಾಲುಗಳು  ೩೧ - ೩೨ ]

ಹಾಗೆ ಮೆಲ್ಲನೆ ಸಿಗರೇಟು ತೀರುತ್ತ ಬಾಳ ಸತ್ಯತೆಯನ್ನು ಮೆಲಕಾಕುತ್ತ ಕೊನೆಯೆಣಿಸುವ ಕಡೆಯ ಸಾಲುಗಳಿಗೆ, ಸಂಗ್ ಸೂ ಅವರ ಪದ್ಯದ ಅಂತ್ಯ ಸಾಲುಗಳು " ಹೇಗೆ ಅಲೆಯ ಮೇಲೆ ಸವಾರಿ ಮಾಡುತ್ತ ಬಾಳಸಿರಿ ಕಾವ್ಯಾತ್ಮ ಸಿರಿ ವಿಶಾಲತೆಯನ್ನಪ್ಪಿ ಒಂದಾಗುವುದು" ಎಂಬುದನ್ನು ವಿವರಿಸುತ್ತ ಅಡಿಗರ ಪದ್ಯದ ಅಂತ್ಯಕ್ಕೆ ತಾನಗಿಯೆ ವಿಶೇಷ ಅರ್ಥ ಬರೆದಿಟ್ಟಂತಿದೆ. ಅತ್ಯಂತ ಸರಳವಾಗಿ ಅಡಿಗರ ಧೂಮಲೀಲೆಯನ್ನು ಅರ್ಥೈಸಿದಂತಿದೆ.

    ಸಿಗರೇಟು ತೀರುತಿದೆ ಹೊಗೆಯು ಏರುತಿದೆ,
   
ಹೊಗೆಯು ಮೊದಲು ಕೊನೆಯು!
   
ಬಾಳ ನನೆಯ ಕೊನೆಯು "  [ ಧೂಮಲೀಲೆ ಸಾಲುಗಳು  ೩೩ - ೩೫ ]
ಇದರ ನಡುವೆ ಷರೀಫರ "ಗುಡuಗುಡಿಯ ಸೇದಿ ನೋಡೊ" ಸಾಲುಗಳು ಖಂಡಿತ ಸುಳಿದು ಮನಕಲಕದಿರದೆ ಹೋಗುವುದಿಲ್ಲ. ನಿನ್ನನ್ನೆ ಗುಡಗುಡಿಯಾಗಿಸಿ ಸೇದಿ ಬಿಡು, ಒಳಗಿನ ಅಜ್ಞಾನ ತೊಲಗಿಬಿಡಲೆಂಬ  ಕರೆ ಮತ್ತೂ ಅಧ್ಯಾತ್ಮ ಪ್ರಪಂಚದೊಳಗೆ ಕರೆದೊಯ್ಯುತ್ತದೆ. ಮೂರೂ ಕಾವ್ಯಗಳಲ್ಲಿ ಕಂಡು ಬರುವ ವಸ್ತು ಸಿಗರ್‍ಏಟಾದರು, ಒಂದೊಂದು ಕಾವ್ಯವು ಒಂದಕ್ಕಿಂತ ಒಂದು ಸರಳ, ಒಂದಕ್ಕಿಂತ ಒಂದು ಆಳ ಎನ್ನಿಸುತ್ತದೆ
ಆಳ ಮತ್ತು ಸರಳತೆ ಒಳ್ಳೆಯ ಕಾವ್ಯದ ಗುರುತು ಎಂಬ ಸಂದೇಶವನ್ನಿತ್ತಂತಿದೆ. ನಮ್ಮ ಬದುಕು ಕೊನೆಗೆ  ವಿಶ್ವಾತ್ಮದೊಂದಿಗೆ ಲಯವಾಗುವ ಆಲೋಚನೆಯನ್ನು ಪ್ರಸ್ತುತಪಡಿಸುತ್ತಿವೆ. ಕೊರಿಯ ದೇಶದ ಕಾವ್ಯ ಸಿರಿವಂತಿಕೆ ನಮ್ಮ ನಾಡಿನಷ್ಟಿಲ್ಲದಿದ್ದರು ವಿದ್ಯೆ, ಪ್ರತಿಭೆ, ಆಲೋಚನಾ ಪಥ ಪರಂಪರೆಯ ಸ್ವತ್ತಲವೆಂಬುದನ್ನು ದೃಢ ಪಡಿಸಿದಂತಿದೆ.
ಇತ್ತೀಚಿನವರೆಗೆ [೧೯೦೦] ಕೊರಿಯನ್ ಪದ್ಯಗಳನ್ನು ಬರೆಯಲು ಹಂಜಾ [ ಕೊರಿಯನ್ ಭಾಷೆಯಲ್ಲಿ  ಉಚ್ಚರಿಸುವ ಚೀನೀ ಅಕ್ಷರಗಳು]ಅಕ್ಷರಗಳನ್ನು ಉಪಯೋಗಿಸಲಾಗಿತ್ತು. ಕೊರಿಯಾದ ಪ್ರಚಲಿತ ಹಾಗು ಅಚ್ಚುಮೆಚ್ಚಿನ ಕಾವ್ಯ ಶೈಲಿ ಸಿಜೊ ೧೬,೧೭ ನೆಯ ಶತಮಾನದಷ್ಟು ಹಳೆಯದು.

ಕವಿ ಪರಿಚಯ:
 
ಸಂಗ್ ಸೂ [ ೧೮೯೪..-೧೯೬೩.. ]

 
ಮಹನೀಯರು ಹುಟ್ಟಿದ್ದು ಕೊರಿಯ ದೇಶದ ಇಂದಿನ ರಾಜಧಾನಿ ಸೋಲ್ ನಗರದಲ್ಲಿ, ೧೯೨೫ ರಲ್ಲಿ ಇವರು ಪ್ರೌಢಶಾಲ ಶಿಕ್ಷಕರಾಗಿ, ೧೯೩೦ ರಲ್ಲಿ ಡೊಂಗುಕ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಾರೆ. ಸಮಯದಲ್ಲಿ ಅವರು ಬುದ್ಧನ ವಚನಗಳಿಂದ ಪ್ರ್ಏರಿತರಾಗಿ ಕ್ರೈಸ್ತ ಮತದಿಂದ ಬೌದ್ಧ ಧರ್ಮಕ್ಕೆ ಮೊರೆ ಹೋಗುತ್ತಾರೆ. ಕಾಲದ ಪ್ರಸಿದ್ಧ ಸಾಹಿತ್ಯ ಪತ್ರಿಕೆಪೆಹಿಯೊಅಂದರೆ ruins/ಪಾಳು ವಿನ ಪ್ರಮುಖ ಲೇಖಕರಾಗಿ ದುಡಿದ ಹೆಗ್ಗಳಿಕೆ ಇವರದು. ಪ್ರಮುಖವಾಗಿ ಇವರು ಸಾಹಿತ್ಯ ವಲಯದಲ್ಲಿ ಸಾವು, ನೈತಿಕತೆ, ಶೂನ್ಯ(ಇಲ್ಲದಿರುವಿಕೆ), nihilism  ಕುರಿತು ಪದ್ಯಗಳನ್ನು ರಚಿಸಿ ಸಮಾಜಕ್ಕೆ ಹೊಸ ರೀತಿಯ ವಾಸ್ತವಿಕೆಯನ್ನು ಹಾಗು ಸೌಂದರ್ಯವನ್ನು ಕೊಡುಗೆಯಾಗಿ ನೀಡುತ್ತಾರೆ. ಅನ್ಯ ಕಾರಣಗಳಿಗು ಪ್ರಸಿದ್ಧರು,ಇವರು ದಿನಕ್ಕೆ ೪೦೦ ಸಿಗರೇಟು ಸೇದುತ್ತಿದ್ದರೆಂದು ಗಾಂಗ್ಚೋ(ವ್ಯಂಗ್ಯ ಅರ್ಥ ಸಿಗರೇಟಿನ ಹಿಂದಿನ ತುದಿ, ನಿಜವಾದ ಅರ್ಥ ಮೀರಿದ, ಅತ್ತ್ಯುತ್ತಮ) ಎಂಬ ಅಡ್ಡೆಸರು ಬಿದ್ದಿದೆ

No comments:

Post a Comment