Thursday, June 13, 2013

Pejawar misquoting basavanna



Pejawara Swamiji is misquoting Basavanna to justify the rampant discrimination taking place at udupi temple based on caste.
[Uppercaste brhamins are treated with the prasada (in the form of Rice food ) in seperate seating arrangement ]

Pejwara seer claims Basavanna differentiated Meat eaters and Non meat eaters, this is utter false statement and seer has to clarify this. Basavanna of 12th century is known to us through the vachanas which are sung in house hold of majority of karnatka state, one such vachana clearly says basavanna never discriminated people based on meat eating.



This is an excertp from todays article [ 13 june 2013] in prajavani



Basavanna vachana
Translation/Meaning
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು
ಅವರನ್ನು ಲಿಂಗನೆಂಬೆ, ಸಂಗನೆಂಬೆ
ಕೂಡಲ ಸಂಗಮದೇವಾ ಅವರ ಮುಖಲಿಂಗಿಗಳೆಂಬೆನು
By profession let him be a butcher, or a seller of liquor, he may consume liquor or meat , if he is able to appreciate wisdom of Sharana saints  and wear the Symbol of unity/equality. Then he is the real human being a true man






ಬಸವಣ್ಣ, ಅಲ್ಲಮ, ಸಿದ್ಧರಾಮ, ಅಕ್ಕಮಹಾದೇವಿ ಮುಂತಾಗಿ 12ನೇ ಶತಮಾನದ ವೈದಿಕ ವಿರೋಧಿ ಹೋರಾಟಗಾರರು ಯಾವುದೇ ಆಹಾರ ಪದ್ಧತಿಯನ್ನು ತುಚ್ಛೀಕರಿಸಿ ಮಾತಾಡಿದ್ದು ಇಲ್ಲ. ಬಸವಣ್ಣ ಮಾಂಸಾಹಾರಿಗಳ ವಿರೋಧಿಯಾಗಿದ್ದ ಎನ್ನಲು ಏನಾದರೂ ಆಧಾರ ಇವೆಯೇ? ದಲಿತರ ಕೇರಿಗೆ ಹೋಗಿ ಅವರನ್ನು ಅಪ್ಪಿಕೊಂಡು ಅಪ್ಪ, ಬೊಪ್ಪ ನನ್ನಯ್ಯ, ಚಿಕ್ಕಯ್ಯ ಎಂದು ಗೌರವಿಸಿದ ಬಸವಣ್ಣ ಇದೇ ಸಂದರ್ಭದಲ್ಲಿ
ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲ್ಲಿ ಮಾಂಸ
ಬಾಯಲ್ಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು
ಅವರನ್ನು ಲಿಂಗನೆಂಬೆ, ಸಂಗನೆಂಬೆ
ಕೂಡಲ ಸಂಗಮದೇವಾ ಅವರ ಮುಖಲಿಂಗಿಗಳೆಂಬೆನು
ಎಂದು ಹೇಳುತ್ತಾರೆ.  ವೃತ್ತಿಯಿಂದ ಚಾಂಡಾಲನೇ ಆಗಿರಲಿ. ಪ್ರವೃತ್ತಿಯಿಂದ ಮಾಂಸಾಹಾರಿ, ಸುರೆ ಸೇವಿಸುವವನಾಗಿರಲಿ, ಅಂಥವನು ಕೂಡಾ ಶರಣಸಿದ್ಧಾಂತವನ್ನು ಗೌರವಿಸುವವನಾದರೆ ಸಮಾನತೆಯ ಪ್ರತೀಕವಾದ ಲಿಂಗ ಧರಿಸಿದನಾದರೆ ಅವನನ್ನು ಸಂಗಯ್ಯನೆಂದೇ ಕಾಣುತ್ತೇನೆ ಎಂದು ಈ ವಚನದಲ್ಲಿ ತುಂಬ ಸ್ಪಷ್ಟವಾಗಿ ಬಸವಣ್ಣನವರು ಹೇಳಿದ್ದಾರೆ.


ಕುರಿ ಕೋಳಿ ಕಿರಿ ಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳು ಜಾತೆಯೆಂಬರು
ಅವರೆಂತು ಕೀಳು ಜಾತಿಯಾದರು? ಜಾತಿಗಳೇ ನೀವೇಕೆ ಕೀಳಾಗಿರೋ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು
ಮಾದಿಗರುಂಡದ್ದು ಪುಲ್ಲಿಗೆ, ಬ್ರಾಹ್ಮಣರಿಗೆ ಶೋಭಿತವಾಯಿತು
ಅದೆಂತೆಂದಡೆ; ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ದವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯ
ಉರಿಲಿಂಗಪೆದ್ದಿಗಳರಸು ಒಲ್ಲನವ್ವ.

ಕಾಳವ್ವೆಯ ಈ ವಚನ ಅಂದು -ಇಂದಿಗೂ ಚಾಲ್ತಿಯಲ್ಲಿರುವ ಶೂದ್ರಾತಿ ಶೂದ್ರರ ಆಹಾರ ಪದ್ಧತಿ ಕುರಿತು ಸ್ವಾಭಿಮಾನದ ಪ್ರಶ್ನೆ ಎತ್ತುತ್ತದೆ. ಇಲ್ಲಿ ಮಾಂಸಾಹಾರ ವರ್ಜ್ಯವೆಂದು ಹೇಳಿಯೇ ಇಲ್ಲ. ಬದಲಾಗಿ ಮಾಂಸಹಾರಿಗಳಲ್ಲಿಯೇ ಕೋಳಿ, ಕುರಿ, ಮೀನು ತಿನ್ನುವವರನ್ನು ಶ್ರೇಷ್ಠ ಕುಲದವರೆಂದು, ಸತ್ತ ದನದ ಮಾಂಸ ತಿನ್ನುವವರನ್ನು ಕೀಳು ಕುಲದವರೆಂದು ಭೇದ ಕಲ್ಪಿಸುವುದೇಕೆ?
ಮಾಂಸಾಹಾರಿಗಳಲ್ಲೂ ವರ್ಗೀಕರಣ ಮಾಡಿದ ಧೂರ್ತತನವನ್ನು ಕಾಳವ್ವೆ `ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು' ಎಂದು ಕಟುಕುತ್ತಾಳೆ. ಸಣ್ಣ ಪ್ರಾಣಿಗಳನ್ನು ಒಂದಿಂಚೂ ಬಿಡದೆ ಪೂರ್ತಿ ತಿನ್ನುವ ಮೇಲ್ವರ್ಗಕ್ಕಿಂತ ಮುದಿ ದನದ ಮಾಂಸ ತಿಂದು ಮೇಲಿನ ಚರ್ಮ ಹದ ಮಾಡಿ ಅದರಿಂದ ತುಪ್ಪ ತುಂಬುವ ಸಗ್ಗಳಿಕೆ ಮತ್ತು ನೀರು ತುಂಬಿಸಬಹುದಾದ ಸಿದ್ದಲಿಕೆ ಮಾಡುವ ದುಡಿಯುವ ವರ್ಗವೇ ಗೌರವಕ್ಕೆ ಪಾತ್ರವಲ್ಲವೇ? ಎಂದು ಕೇಳುತ್ತಾಳೆ. ಕಾಳವ್ವೆ ತನ್ನಂಥವರ ಆಹಾರ ಸಂಸ್ಕೃತಿಯ ಹಿಂದಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪಲಕುಗಳನ್ನು ತುಂಬಾ ಸೂಕ್ಷ್ಮವಾಗಿಯೇ ಹೊಳೆಯಿಸುತ್ತಾಳೆ. ಆಹಾರ ಪದ್ಧತಿಯನ್ನು ಟೀಕಿಸುವರಿಗೆ ನಾಯಕ ನರಕ ತಪ್ಪದೆಂದು ಎಚ್ಚರಿಸುತ್ತಾಳೆ.
ಬಸವಾದಿ ಶರಣರು ಯಾಗ, ಯಜ್ಞಗಳ ಹೆಸರಿನಲ್ಲಿ ನಡೆಸುವ ಪ್ರಾಣಿ ವಧೆಯನ್ನು ಧಿಕ್ಕರಿಸಿರುವುದುಂಟು;
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೆ ಅಳು ಕಂಡ್ಯಾ
ವೇದವನೋದಿದವರ ಮುಂದೆ ಅಳು ಕಂಡ್ಯಾ
ಶಾಸ್ತ್ರವನೋದಿದವರ ಮುಂದೆ ಅಳು ಕಂಡ್ಯಾ.......
ಎಂಬ ಈ ವಚನದಲ್ಲಿ ವಿಪ್ರರು ಸರ್ವದಯಾಪರ ಆದರ್ಶಗಳನ್ನು ಹೇಳುತ್ತಲೇ ಯಾಗಗಳಲ್ಲಿ ಬಲಿ ಕೊಡುವ ಹೋತಿನ ಆಕ್ರಂದನವನ್ನು ಕುರಿತು ಕೂಡಲಸಂಗಯ್ಯನಲ್ಲಿ ಮೊರೆಯಿಡುತ್ತಾರೆ. ಅಂತೆಯೇ  `ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಛೆಗೆ `ಎನ್ನುತ್ತಾನೆ.
ದೇವರ ಹೆಸರಿನಲ್ಲಿ ತಾನು ಪ್ರಾಣಿಗಳ ವಧೆ ಮಾಡಿ ಕದ್ದು ಮುಚ್ಚಿ ಮಾಂಸಾಹಾರ ಸೇವಿಸಿ ಶಾಖಾಹಾರ ವೈಭವೀಕರಿಸುವ ಡಂಭಾಚಾರಿಗಳ ಬಣ್ಣ ಬಯಲಿಗೆಳೆದಿದ್ದಾರೆ. ಜೇಡರ ದಾಸಿಮಯ್ಯನು ತನ್ನೊಂದು ವಚನದಲ್ಲಿ, `ಅಡಗುತಿಂಬರು ಕಣಕದಡಿಗೆಯಿರಲ್ಕೆ, ಕುಡಿಯುವರು ಸುರೆಯ ಹಾಲಿರಲಿಕ್ಕೆ' ಎಂದು ಟೀಕಿಸುತ್ತಾನೆ. ಕಣಕದ ಅಡುಗೆ ಇರಲಿಕ್ಕೆ ಅಂದರೆ ಸಸ್ಯಾಹಾರದ ಸಮೀಚಿನ ಭೋಜನವಿದ್ದಾಗಲೂ ಬಡವರ ಆಹಾರ ಕಸಿದುಕೊಳ್ಳುವ, ಹಾಲು ಸಮೃದ್ಧವಾಗಿರಲೂ ನಶೆ ಏರಿಸುವ ಮದ್ಯ ಸೇವಿಸುವುದನ್ನು ಖಂಡಿಸುತ್ತಾನೆ. ಬದುಕಲು ಅವಶ್ಯವಿರುವಷ್ಟು ಸಸ್ಯಾಹಾರ ಎಲ್ಲರಿಗೂ ಸಿಗದಿರುವ ಸಂದರ್ಭದಲ್ಲಿ ಮಾಂಸಹಾರವನ್ನು ತುಚ್ಛವೆಂದು ಅವರೆಲ್ಲೂ ಹೇಳಿಲ್ಲ.
ಧಾರ್ಮಿಕ ಕಾರಣಗಳಿಗಾಗಿ ಮತ್ತು ಬಾಯಿ ಚಟಕ್ಕಾಗಿ ಪ್ರಾಣಿಗಳನ್ನು ಕೊಲ್ಲುವವರನ್ನು ಶರಣರು ಉಗ್ರವಾಗಿ ಖಂಡಿಸಿದ್ದಾರೆ. ಆದರೆ ನಿಸರ್ಗ ಧರ್ಮದ ಬಗೆಗೆ ಅವರೆಲ್ಲೂ ಅವಾಸ್ತವ, ಅವೈಜ್ಞಾನಿಕ, ಆದರ್ಶಗಳನ್ನಿಟ್ಟುಕೊಂಡವರಾಗಿರಲಿಲ್ಲ. 12ನೇ ಶತಮಾನದ ಶರಣರ ಸಮಗ್ರ ವಚನಗಳನ್ನು ತಲಸ್ಪರ್ಶಿಯಾಗಿ ಅಭ್ಯಸಿಸಿದವರಿಗೆ ಇದು ಗಮನಕ್ಕೆ ಬರದೆ ಇರದು. ಆದ್ದರಿಂದ ಪಂಕ್ತಿಭೇದದಂಥ ಅನೈತಿಕ ವಿಚಾರವನ್ನು ಸಮರ್ಥಿಸಿಕೊಳ್ಳಲು ಪೇಜಾವರಶ್ರಿಗಳು ಬಸವಣ್ಣನವರನ್ನು ತಪ್ಪು ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಬಸವಾದಿ ಶರಣರನ್ನು ಉದ್ದೇೀಶಪೂರ್ವಕವಾಗಿ ತಪ್ಪಾಗಿ ಬಿಂಬಿಸುತ್ತಿರುವ ಈ ಹುನ್ನಾರಗಳನ್ನು ಅರ್ಥಮಾಡಿಕೊಂಡು ನಾವೆಲ್ಲ ಪ್ರಾಂಜಲ ಮನಸಿನಿಂದ ವಚನಗಳ ಓದಿಗೆ ಮತ್ತೆ ಮತ್ತೆ ಒಡ್ಡಿಕೊಳ್ಳಬೇಕಿದೆ.
http://www.prajavani.net/article/%E0%B2%B8%E0%B3%81%E0%B2%B3%E0%B3%8D%E0%B2%B3%E0%B3%81-%E0%B2%B8%E0%B2%BE%E0%B2%B0%E0%B3%81%E0%B2%B5-%E0%B2%B9%E0%B3%81%E0%B2%A8%E0%B3%8D%E0%B2%A8%E0%B2%BE%E0%B2%B0-%E0%B2%A8%E0%B2%BF%E0%B2%B2%E0%B3%8D%E0%B2%B2%E0%B2%B2%E0%B2%BF

1 comment:

  1. JCM HOLD'S GAMING - JUMBI - JTM Hub
    JCM HOLD'S GAMING. JCM HOLD'S 부천 출장마사지 GAMING. JCM HOLD'S 천안 출장안마 GAMING. Gambling, gambling, gambling, 원주 출장샵 gambling, gambling, gambling, 나주 출장마사지 gambling, gambling, gambling 제주 출장안마

    ReplyDelete